ಬೇಲಿ
ಅಲೆಮಾರಿ ದನಗಳಿಂದ ಗಿಡಗಳನ್ನು ರಕ್ಷಿಸಲು ಪಾರ್ಕ್‌ನ ಎರಡು ಬದಿಗಳಲ್ಲಿ ಬೇಲಿ ಅವಶ್ಯಕವಾಗಿತ್ತು. ಬಣ್ಣ ಹಚ್ಚುವ ಕೆಲಸ ಬಿಟ್ಟು ಉಳಿದ ಕೆಲಸ ಪೂರ್ಣಗೊಂಡಿದೆ.
ನಡಿಗೆ ಮಾರ್ಗ
ನಡಿಗೆ ಮಾರ್ಗ ಗುರುತಿಸಲಾಗಿದೆ, ಕೆಲವು ತಾಣಗಳನ್ನು ಹೊರತುಪಡಿಸಿ 3 ಇಂಚು ಮಣ್ಣು ತೆಗೆದು ಜಲ್ಲಿ ಹಾಕಲಾಗಿದೆ. ರೋಲಿಂಗ್ ಕೆಲಸ ಬಾಕಿ ಇದೆ.
ದುರಸ್ತಿ
ಹಿಂದಿನ ಕಟ್ಟಡ ರಚನೆಗಳನ್ನು ಅಗತ್ಯವಿದ್ದಲ್ಲಿ ದುರಸ್ತಿ ಮಾಡಲಾಗಿದೆ. ಹೂವಿನ ಸಸಿಗಳನ್ನು ನೆಡಲು ನೀರಿನ ಮಾರ್ಗಗಳನ್ನು ಕೆಂಪು ಮಣ್ಣಿನಿಂದ ತುಂಬಲಾಗಿದೆ.
ಸೇತುವೆ
ಜಪಾನೀ ಸೇತುವೆ, ಮೆಟ್ಟಿಲು ಮತ್ತು ರೇಲಿಂಗ್‌ಗಳನ್ನು ದುರಸ್ತಿ ಮಾಡಲಾಗಿದೆ. ರಚನೆಗಳಿಗೆ ಬಣ್ಣ ಹಚ್ಚುವ ಕೆಲಸ ಬಾಕಿ ಇದೆ.
ಸ್ವಚ್ಛತೆ
ಪೊದೆಗಳನ್ನು ತೆರವುಗೊಳಿಸುವ ಪ್ರಮುಖ ಕೆಲಸ ಮುಗಿದಿದೆ.